US and Mexico drop bid to host 2027 World Cup

ಸಂಯುಕ್ತ ಮೆಕ್ಸಿಕನ್ ಸಂಸ್ಥಾನಗಳು ಅಥವಾ ಮೆಕ್ಸಿಕೋ ಉತ್ತರ ಅಮೆರಿಕಾದ ಒಂದು ರಾಷ್ಟ್ರವಾಗಿದೆ. ಇದರ ಉತ್ತರಕ್ಕೆ ಯು.ಎಸ್.ಎ, ದಕ್ಷಿಣ ಮತ್ತು ಪಶ್ಚಿಮಕ್ಕೆ ಉತ್ತರ ಶಾಂತಸಾಗರ, ಪೂರ್ವದಲ್ಲಿ ಮೆಕ್ಸಿಕೋ ಕೊಲ್ಲಿ, ಆಗ್ನೇಯಕ್ಕ…
ಸಂಯುಕ್ತ ಮೆಕ್ಸಿಕನ್ ಸಂಸ್ಥಾನಗಳು ಅಥವಾ ಮೆಕ್ಸಿಕೋ ಉತ್ತರ ಅಮೆರಿಕಾದ ಒಂದು ರಾಷ್ಟ್ರವಾಗಿದೆ. ಇದರ ಉತ್ತರಕ್ಕೆ ಯು.ಎಸ್.ಎ, ದಕ್ಷಿಣ ಮತ್ತು ಪಶ್ಚಿಮಕ್ಕೆ ಉತ್ತರ ಶಾಂತಸಾಗರ, ಪೂರ್ವದಲ್ಲಿ ಮೆಕ್ಸಿಕೋ ಕೊಲ್ಲಿ, ಆಗ್ನೇಯಕ್ಕೆ ಗ್ವಾಟೆಮಾಲಾ, ಬೆಲಿಝ್ ಮತ್ತು ಕೆರಿಬ್ಬಿಯನ್ ಸಮುದ್ರಗಳಿವೆ. ಮೆಕ್ಸಿಕೋ ರಾಷ್ಟ್ರವು ಮೆಕ್ಸಿಕೋ ನಗರವುಳ್ಳ ಜಿಲ್ಲೆ ಮತ್ತು ೩೧ ಸಂಸ್ಥಾನಗಳನ್ನೊಳಗೊಂಡ ಒಂದು ಸಾಂವಿಧಾನಿಕ ಒಕ್ಕೂಟ ಗಣರಾಜ್ಯವಾಗಿದೆ. ಮೆಕ್ಸಿಕೋದ ರಾಜಧಾನಿಯಾಗಿರುವ ಮೆಕ್ಸಿಕೋ ನಗರವು ವಿಶ್ವದಲ್ಲಿ ಅತ್ಯಧಿಕ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಒಂದು. ಸುಮಾರು ೨೦ ಲಕ್ಷ ಚ.ಕಿ.ಮೀ. ವಿಸ್ತಾರವಾಗಿರುವ ಮೆಕ್ಸಿಕೋ ಅಮೆರಿಕಾ ಖಂಡಗಳಲ್ಲಿ ಆರನೆಯ ದೊಡ್ಡ ದೇಶ ಮತ್ತು ವಿಶ್ವದಲ್ಲಿ ೧೩ ನೆಯದು. ೧೧ ಕೋಟಿ ಜನರುಳ್ಳ ಈ ರಾಷ್ಟ್ರವು ಜಗತ್ತಿನಲ್ಲಿ ೧೧ನೆಯ ಅತಿ ಜನಬಾಹುಳ್ಯವಿರುವದಾಗಿದ್ದು ವಿಶ್ವದಲ್ಲಿಯೇ ಅತಿ ಹೆಚ್ಚು ಸ್ಪಾನಿಷ್ ಭಾಷಿಕರು ನೆಲೆಸಿರುವ ದೇಶವಾಗಿದೆ.ಮೆಕ್ಸಿಕೋ ಬೆಳ್ಳಿಯ ಕೆರೆನ್ಸಿ ಹೊಂದಿರುವ ವಿಶ್ವದ ಏಕೈಕ ರಾಷ್ಟ್ರವಾಗಿದೆ. ಮೆಕ್ಸಿಕನ್ ಕರೆನ್ಸಿಯ ಹೆಸರು ಪಿಸೋ. ಮೆಕ್ಸಿಕೋದ ಇತರ ಪ್ರಮುಖ ನಗರಗಳೆಂದರೆ ಗ್ವಾದಲಹರ, ನಿಯೋ ಲಿಯೋನ್, ನಿಯೋ ಲಿಯೋನ್ ಜಿಲ್ಲೆಯಲ್ಲಿ ಬರುವ ಮಾಂಟೆರರಿ, ಪ್ಯುಬ್ಲೋ, ಟೊಲುಕ, ತುಜಾನ. ೧ ಅಮೇರಿಕನ್ ಡಾಲರ್ = ೧೮.೧೯ ಮೆಕ್ಸಿಕನ್ ಪಿಸೋ. ೧ ಮೆಕ್ಸಿಕನ್ ಪಿಸೋ =೪.೮೮೩ ಭಾರತೀಯ ರೂಪಾಯಿ
  • Capital: ಮೆಕ್ಸಿಕೋ ನಗರ
  • Largest city: ರಾಜಧಾನಿ
  • Official languages: ಸ್ಪಾನಿಷ್
  • Demonym(s): Mexican
  • Government: ಅಧ್ಯಕ್ಷೀಯ ಒಕ್ಕೂಟ ಗಣರಾಜ್ಯ
  • GDP (PPP): 2006 estimate
  • GDP (nominal): 2006 estimate
ಇಂದ ಡೇಟಾ: kn.wikipedia.org